ನಮಸ್ಕಾರ ಸ್ನೇಹಿತರೇ
ಇಂದಿನ ಬ್ಸಿ ಲೈಫ್‌ನಲ್ಲಿ (Busy Life) ನಮ್ಮ ಆರೋಗ್ಯ ಕಡೆಗಣಿಸುವುದು ಸಾಮಾನ್ಯವಾಗಿದೆ. ಆದರೆ ಚಿಕ್ಕ ಪುಟ್ಟ ಬದಲಾವಣೆಗಳಿಂದ ನಾವು ದೊಡ್ಡ ಕಾಯಿಲೆಗಳನ್ನು ದೂರವಿಡಬಹುದು.
1. ಬೆಳಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿಯಿರಿ :💬
ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 1 ಲೋಟ ಉಗುರು ಬೆಚ್ಚಗಿನ ನೀರು ಕುಡಿಯುವುದನ್ನು ರೂಢಿಸಿಕೊಳ್ಳಿ. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರ ಮಾಡುತ್ತದೆ. ಅಷ್ಟೇ ಅಲ್ಲ, ಇದು ನಿಮ್ಮ ತೂಕ ಇಳಿಸಲು ಕೂಡ ಸಹಾಯಕಾರಿ.
2. ಉಪಹಾರ (Breakfast) ತಪ್ಪಿಸಬೇಡಿ:
ಯಾವುದೇ ಕಾರಣಕ್ಕೂ ಬೆಳಗ್ಗಿನ ತಿಂಡಿಯನ್ನು ಬಿಡಬೇಡಿ. ಸಂಶೋಧನೆಗಳ ಪ್ರಕಾರ, ಬೆಳಗ್ಗೆ ಸರಿಯಾಗಿ ತಿಂಡಿ ತಿನ್ನುವವರು ದಿನವಿಡೀ ಚುರುಕಾಗಿರುತ್ತಾರೆ. ತಿಂಡಿ ಬಿಡುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇದೆ.
3. ದಿನಕ್ಕೇ 30 ನಿಮಿಷ ನಾಡಿಗೆ (Walking):
ಜಿಮ್ ಗೆ ಹೋಗಲು ಆಗದಿದ್ದರೆ ಚಿಂತೆಯಿಲ್ಲ, ಪ್ರತಿದಿನ ಕನಿಷ್ಠ 30 ನಿಮಿಷ ನಡೆಯಿರಿ. ಇದು ನಿಮ್ಮ ಹೃದಯದ ಆರೋಗ್ಯಕ್ಕೆ ಮತ್ತು ರಕ್ತದೊತ್ತಡ (BP) ಹತೋಟಿಯಲ್ಲಿಡಲು ಸಹಾಯ ಮಾಡುತ್ತದೆ.
4. 7- 8 ಗಂಟೆ ನಿದ್ದೆ ಮಾಡಿ :
ರಾತ್ರಿ ವೇಳೆ ಮೊಬೈಲ್ ನೋಡುವುದನ್ನು ಕಡಿಮೆ ಮಾಡಿ, ಕನಿಷ್ಠ 7 ರಿಂದ 8 ಗಂಟೆಗಳ ಕಾಲ ಚೆನ್ನಾಗಿ ನಿದ್ದೆ ಮಾಡಿ. ಒಳ್ಳೆಯ ನಿದ್ದೆ ನಿಮ್ಮ ಆಯಸ್ಸನ್ನು ಹೆಚ್ಚಿಸುತ್ತದೆ.
5. ಸಕ್ಕರೆ ಕಡಮೆ ಉಪಯೋಗಿಸಿ.
ಆದಷ್ಟು ಸಕ್ಕರೆ (Sugar) ಬಳಕೆ ಕಡಿಮೆ ಮಾಡಿ. ಬದಲಿಗೆ ಬೆಲ್ಲ ಅಥವಾ ಜೇನುತುಪ್ಪ ಬಳಸಿ. ಸಕ್ಕರೆ ಕಾಯಿಲೆ ಬರುವುದನ್ನು ತಡೆಯಲು ಇದು ಬೆಸ್ಟ್ ಉಪಾಯ.
ಗಮನಿಸಿ.
ಈ ಮೇಲಿನ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಿಮಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.
ಈ ಮಾಹಿತಿ ಇಷ್ಟವಾದರೆ, ನಿಮ್ಮ ಫ್ರೆಂಡ್ಸ್ ಜೊತೆ ಶೇರ್ ಮಾಡಲು ಮರೆಯಬೇಡಿ!

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ